ನಿರಂತರ ಗುಣಮಟ್ಟ ಮತ್ತು ಉತ್ತಮ ಶಿಕ್ಷಣ ನೀಡುವಿಕೆಯಲ್ಲಿ ಉಡುಪಿ ಮತ್ತು ಕುಂದಾಪುರ ಭಾಗದಲ್ಲಿಯೇ ಗುರುಕುಲ ಪಬ್ಲಿಕ್ ಶಾಲೆ ಗುರುತರವಾದ ಪ್ರಬಾವವನ್ನು ಬೀರಿದೆ. ಶಾಲೆಯ ನಿರಂತರ ಕ್ರೀಯಾಶೀಲ ಚಟುವಟಿಗಳು, ಸಮಾಜಮುಖಿ ಕಾರ್ಯಕ್ರಮಗಳು ಹಾಗೂ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಗಳಲ್ಲಿ ಪಡೆದ ಅಂಕಗಳು ಇವೆಲ್ಲವೂ ಸಂಸ್ಥೆಯು ವೇಗವಾಗಿ ಪ್ರವರ್ಧಮಾನಕ್ಕೆ ಬರಲು ಸಹಾಯಕವಾಗಿದೆ. ಇದಕ್ಕೆ ನಿದರ್ಶನವೆಂಬಂತೆ ರಾಷ್ಟ್ರದ ಪ್ರತಿಷ್ಠಿತ ಮಾಸಿಕ ಶಿಕ್ಷಣ ಪತ್ರಿಕೆಗಳಲ್ಲೊಂದಾದ ‘ಬ್ರೈನ್ ಫೀಡ್’ ತನ್ನ 5ನೇ ವರ್ಷದ ರಾಷ್ಟ್ರೀಯ ಶಿಕ್ಷಣ ಪ್ರಶಸ್ತಿಯನ್ನು ವಿವಿಧ ಖಾಸಗಿ ಶಿಕ್ಷಣ ಸಂಸ್ಥಗಳಿಗೆ ನೀಡಿತು. ಅದರಲ್ಲಿ ದಕ್ಷಿಣಭಾರತದ ಕೇಂದ್ರೀಯ ಪಠ್ಯಕ್ರಮದ ಪ್ರಮುಖ ಸಂಸ್ಥೆಗಳಲ್ಲೊಂದಾಗಿ ಹಾಗೂ ಕರ್ನಾಟಕದಲ್ಲಿಯೇ ಹತ್ತನೆಯ ಪ್ರಮುಖ ಶಿಕ್ಷಣಸಂಸ್ಥೆಯಾಗಿ ಗುರುಕುಲ ಪಬ್ಲಿಕ್‍ಶಾಲೆಗೆ ಪ್ರಶಸ್ತಿ ನೀಡಿ ಗೌರವಿಸಿತು. ಅಲ್ಲದೇ, ಸತತ 5 ವರ್ಷಗಳಿಂದ 100ಕ್ಕೆ 100 ಫಲಿತಾಂಶಗಳನ್ನು ಸಿ.ಬಿ.ಎಸ್.ಇ ವಾರ್ಷಿಕ ಪರೀಕ್ಷೆಯಲ್ಲಿ ತೊರಿಸಿದ ಬಗ್ಗೆ ಹಾಗೂ ಅತ್ಯಾಧುನಿಕ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡ ಬಗ್ಗೆ ಮೌಲ್ಯಮಾಪನ ಮಾಡಿ ಶಾಲೆಗೆ ಪ್ರಶಸ್ತಿಯನ್ನು ನೀಡಲಾಯಿತು. ಈ ಪ್ರಶಸ್ತಿ ಪ್ರಧಾನ ಸಮಾರಂಭವು ರಾಜ್ಯ ಶಿಕ್ಷಣ ಮಂತ್ರಿ ಶ್ರೀ.ತನ್ವೀರ್ ಸೇಠ್‍ರವರ ಘನ ಉಪಸ್ಥಿತಿಯಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು. ಗುರುಕುಲ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀ.ಸಾಯಿಜು.ಕೆ.ಆರ್.ನಾಯರ್ ರವರು ಈ ಪ್ರಶಸ್ತಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳ ಪರವಾಗಿ ಸ್ವೀಕರಿಸಿದರು.