ಚದುರಂಗ ಪ್ರಾಚೀನ ಭಾರತದ ಕ್ರೀಡೆಯಲ್ಲಿ ಒಂದಾಗಿದೆ. ಸ್ಪರ್ಧಾಳುಗಳ ಏಕಾಗ್ರತೆ, ಬುದ್ಧಿಮತ್ತೆ ಹಾಗು ಸೂಕ್ಷ್ಮ ಮತಿತ್ವದ ಸಾಮಥ್ರ್ಯವನ್ನು ಹೆಚ್ಚಿಸಲು ಈ ಕ್ರೀಡೆ ಅತ್ಯಂತ ಸಹಾಯಕಾರಿ. ಹಿಂದಿನ ದಿನಗಳಲ್ಲಿ ಈ ಕ್ರೀಡೆಯ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಿದ್ದು ಕಡಿಮೆಯಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಶಾಲಾ ಕಾಲೇಜುಗಳು ಚದುರಂಗ ಪಂದ್ಯಾಟವನ್ನು ಏರ್ಪಡಿಸಿ ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತಿದೆ ಎನ್ನುವುದು ಪಾಲಕರಿಗೆ ಸಂತೋಷವನ್ನು ತಂದಿದೆ ಎಂದು ದಿನಾಂಕ 27.01.2018 ರ ಶನಿವಾರದಂದು ಗುರುಕುಲ ವಿದ್ಯಾಸಂಸ್ಥೆ ವಕ್ವಾಡಿ ಆಯೋಜಿಸಿದ ಅಂತರ್‍ಜಿಲ್ಲಾ ಚದುರಂಗ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಅಥಿತಿಗಳಾಗಿ ಆಗಮಿಸಿದ ಶ್ರೀ.ಸುರೇಶ್ ಕಾಮತ್. ಮ್ಯಾನೇಜಿಂಗ್ ಪಾರ್ಟ್‍ನರ್ ರಾಜಾರಾಮ್ ಪಾಲಿಮರ್ ಕೋಟೇಶ್ವರ ರವರು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇವರು ಚದುರಂಗ ಆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಗುರುಕುಲ ವಿದ್ಯಾಸಂಸ್ಥೆಯ ಈ ಒಂದು ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರಲ್ಲದೇ, ಸ್ಪರ್ಧಾಳುಗಳಲ್ಲಿ ಕ್ರೀಡೆಯ ಮಹತ್ವದ ಬಗ್ಗೆ ಅರಿವು ಮೂಡಿಸಿದರು.
ಈ ಚದುರಂಗ ಪಂದ್ಯಾಟದಲ್ಲಿ ಸುಮಾರು 375 ಕ್ಕೂ ಹೆಚ್ಚು ಉಡುಪಿ, ಮಂಗಳೂರು, ಚಿಕ್ಕಮಗಳೂರು ಹಾಗೂ ಉತ್ತರಕನ್ನಡ ಶಾಲೆಗಳ ವಿದ್ಯಾರ್ಥಿಗಳು ಕ್ರಮವಾಗಿ Uಟಿಜeಡಿ 9,12 ಮತ್ತು 15 ಭಾಗವಹಿಸಿದ್ದರು. ಹುಡುಗ ಹುಡುಗಿಯರಿಗೆ ಪ್ರತ್ಯೇಕವಾಗಿ ನಡೆದ ಈ ಪಂದ್ಯಾಟವು ಉತ್ತಮ ಫಲಿತಾಂಶದೊಂದಿಗೆ ಸಂಪನ್ನಗೊಂಡಿತು. ಈ ಪಂದ್ಯಾಟವನ್ನು ಅಂತರಾಷ್ಟ್ರೀಯ ಚೆಸ್ ತರಬೇತುದಾರರಾದ ಶ್ರೀ.ಪ್ರಸನ್ನ ರಾವ್ ರವರ ನೇತೃತ್ವದಡಿಯಲ್ಲಿ ಹಾಗೂ ಕಶ್ವಿ ಚೆಸ್ ಅಸೋಸಿಯೇಶನ್‍ರ ಸಹಕಾರದೊಂದಿಗೆ ನಡೆಯಿತು. ವಿಜೇತರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರುಗಳಾದ ಶ್ರೀ.ಸುಭಾಶ್ಚಂದ್ರ ಶೆಟ್ಟಿ ಹಾಗೂ ಶ್ರೀಮತಿ. ಅನುಪಮ.ಎಸ್.ಶೆಟ್ಟಿ ರವರು ಪ್ರಶಸ್ತಿ ಪತ್ರ ಮತ್ತು ಬಹುಮಾನ ನೀಡಿ ಪ್ರಶಂಸನಾ ಮಾತುಗಳನ್ನಾಡಿದರು. ಅಲ್ಲದೇ 4 ಜಿಲ್ಲೆಗಳಿಂದ ಬಂದ ವಿದ್ಯಾರ್ಥಿಗಳು ಕಾರ್ಯಕ್ರಮದ ಆಯೋಜನೆಯ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದರು ಅಲ್ಲದೇ ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಮಟ್ಟದ ಪಂದ್ಯಾಟವನ್ನು ಗುರುಕುಲ ಪಬ್ಲಿಕ್ ಶಾಲೆ ಆಯೋಜಿಸಲಿದೆ ಎನ್ನುವ ಶ್ರೀಮತಿ ಅನುಪಮ.ಎಸ್ ಶೆಟ್ಟಿಯವರ ಮಾತುಗಳಿಗೆ ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಗುರುಕುಲ ಪಬ್ಲಿಕ್ ಶಾಲೆಯ ಪ್ರಾಂಶುಪಾಲರು ಪ್ರಾಸ್ತಾವಿಕ ನುಡುಗಳನ್ನಾಡಿದರು. ಶಿಕ್ಷಕಿ ಶ್ರೀಮತಿ ನಂದಿನಿ ಕಾರ್ಯಕ್ರಮ ನಿರೂಪಿಸಿದರು. ಹಾಗೂ ಶ್ರೀಮತಿ ಸುಮನ್ ಪೈ ಮತ್ತು ಶ್ರೀಮತಿ ಸುಷ್ಮಾ ಕ್ರಮವಾಗಿ ಸ್ವಾಗತ ಮತ್ತು ವಂದನಾರ್ಪಣೆ ಮಾಡಿದರು.