ಜುಲೈ 03: ವಕ್ವಾಡಿ : ಗುರುಕುಲ ಶಿಕ್ಷಣ ಸಂಸ್ಥೆಯಲ್ಲಿ 2016-17 ನೇ ಸಾಲಿನಲ್ಲಿ ಅಖಿಲ ಭಾರತೀಯ ರಾಷ್ಟ್ರಭಾಷಾ ವಿಕಾಸ ಸಮಿತಿಯು ಆಯೋಜಿಸಿದ ರಾಷ್ಟ್ರ ಮಟ್ಟದ ಹಿಂದಿ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ತನ್ಮಯ ಶೆಟಿ ್ಟ, ಅಬ್ದುಲ್ ಸಲಾಂ, ರಕ್ಷಣ್ ಕುಂದಾಪುರ್ ಮತ್ತು ಸಮಿತಾ ಇವರು ಹಿಂದಿ ಶಿಕ್ಷಕ ವಿಜಯಕುಮಾರವರ ಮಾರ್ಗದರ್ಶನದಲ್ಲಿ ಬಾಲರತ್ನ ಪುರಸ್ಕಾರಕ್ಕೆ ಭಾಜನರಾಗುವಮೂಲಕ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ. ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯ ಮುಖ್ಯಸ್ಥರು ಅಭಿನಂದಿಸಿರುತ್ತಾರೆ.